ಪಡ್ಡೆ ಹುಲಿ ಕೆ. ಮಂಜು ಬರೆದಿರುವ ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ 2019 ರ ಕನ್ನಡ ಭಾಷೆಯ ಆಕ್ಷನ್ ಚಲನಚಿತ್ರವಾಗಿದೆ. ಎಂ. ರಮೇಶ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ರೇಯಸ್ ಮಂಜು ಮತ್ತು ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ವಿ. ರವಿಚಂದ್ರನ್, ಸುಧಾರಾಣಿ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿದರೆ, ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೇಜಸ್ವಿನಿ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಛಾಯಾಗ್ರಹಣ ಕೆ ಎಸ್ ಚಂದ್ರಶೇಖರ್ ಅವರದ್ದು. ಈ ಚಿತ್ರವು 2017 ರ ತಮಿಳಿನ ಮೀಸಯ ಮುರುಕ್ಕು ಚಿತ್ರದ ರಿಮೇಕ್ ಆಗಿದೆ. == ಪಾತ್ರವರ್ಗ == ಸಂಪತ್ ಪಾತ್ರದಲ್ಲಿ ಶ್ರೇಯಸ್ ಮಂಜು ಸಂಗೀತಾ ಪಾತ್ರದಲ್ಲಿ ನಿಶ್ವಿಕಾ ನಾಯ್ಡು ಸಂಪತ್ ತಂದೆಯಾಗಿ ವಿ.ರವಿಚಂದ್ರನ್ ಸಂಪತ್ ಅವರ ತಾಯಿಯಾಗಿ ಸುಧಾರಾಣಿ ಚಿಕ್ಕಣ್ಣ ವಿನಾಯಕ ಜೋಶಿ ಧರ್ಮಣ್ಣ ಕಡೂರು ಅಮಿತ್ ವಿಶ್ವನಾಥ್ ಮಧುಸೂಧನ್ ರಾವ್ ಸುಂದರ್ ರಾಮ್ ಸ್ವಾತಿ ಗುರುದತ್ ಭಾಸ್ಕರ್ ಸೂರ್ಯ ಕರ್ಣನಾಗಿ ರಕ್ಷಿತ್ ಶೆಟ್ಟಿ (ಕ್ಯಾಮಿಯೋ ಪಾತ್ರ) ಪುನೀತ್ ರಾಜ್ ಕುಮಾರ್ ಅವರೇ ಆಗಿ(ಕ್ಯಾಮಿಯೋ ಪಾತ್ರ) == ಹಿನ್ನೆಲೆಸಂಗೀತ == ಹಿನ್ನೆಲೆಸಂಗೀತವನ್ನು ಬಿ. ಅಜನೀಶ್ ಲೋಕನಾಥ್ ಸಂಯೋಜಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪಡ್ಡೆ ಹುಲಿ @ ಐ ಎಮ್ ಡಿ ಬಿ